ಮಳೆಗಾಲ   ಅಂದ್ರೆ   ಸುರ್ರನೆ   ಸುರಿಯೋ   ಮಳೆ .  ವಟಗುಟ್ಟುವ   ಕಪ್ಪೇಗಳು .  ಮಳೆ   ನಿಂತರು   ನಿಲ್ಲದ   ಮರದ   ಹನಿಗಳು .  ಕಿಟಕಿಯ   ಹೊರಗೆ   ಮತ್ತೊಂದು   ಹೊಸ   ಜಗತ್ತು    ಅನಾವರಣಗೊಂಡ   ಹಾಗಿರುತ್ತೆ .  ಮಲೆನಾಡಲ್ಲಿ ,  ಮಳೆಯ   ಹಾಡಿನ   ನಡುವೆ   ಸೂರ್ಯನ   ಬಿಸಿಲನ್ತು   ಮಳೆ   ಮುಗಿಯೋವರೆಗೆ   ಮರೆತೆ   ಬಿಡಬೇಕು .  ಹಾಗಂತ   ಬಿಸಿಲು   ಇರೋದೇ   ಇಲ್ಲ   ಅಂತಾನು   ಹೇಳೊಕಾಗಲ್ಲ ,  ಕಂಡರೆ   ಅದೊಂದು   ಎಳೆ   ಬಿಸಿಲು   ಇದ್ದ   ಹಾಗೆ ,  ಮನಸ್ಸಿಗೆ   ಒಂಥರ    ಹಿತವಾಗಿರುತ್ತೆ .  ಚಳಿ   ಮಳೆಗಾಲದ   ಅವಿಭಾಜ್ಯ   ಅಂಗ   ಅಂದುಕೊಳ್ಳಿ .  ಅನ್ದುಕೊಳ್ಳೋದೆನು   ಅದು   ಇದ್ದೇ   ಇರುತ್ತೆ .  ಆದರೆ   ರೈತಾಪಿ   ಜನಗಳಿಗೆ   ಮಳೆಗಾಲ   ಶುರು   ಆಯ್ತು   ಅಂದ್ರೆ   ಆರಂಭ  ( ಕೃಷಿ ,  ವ್ಯವಸಾಯ )  ಮಾಡೋ   ಕಾಲ .  ಮನೆಗೆ    ಅದಕ್ಕಿಂತ   ಮುಂಚೆ   ಸೌಧೆ  ( ಉರುವಲು )  ಜೋಡಿಸ್ಬೇಕು ,  ಮನೆಯ   ಅಟ್ಟನಿಗೆ   ಎಲ್ಲ   ಸರಿ   ಮಾಡ್ಬೇಕು ,  ವ್ಯವಸಾಯಕ್ಕೆ   ಬೇಕಾಗೋ   ಅದು   ಇದು   ಎಲ್ಲ   ಸಿದ್ಧ   ಮಾಡಿ   ಇಟ್ಕೋಬೇಕು . 
ವ್ಯವಸಾಯ   ಮಾಡೋದೇನೋ   ಸರಿ,  ಹೊಟ್ಟೆಗೆ ?  ಮಳೆಗಾಲಕ್ಕೆ   ಮುಂಚೆ   ಖಾರದ   ಪುಡಿ,  ಹಪ್ಪಳ,  ಸನ್ಡಿಗೆ,  ಚಕ್ಕಲಿ   ಎಲ್ಲ   ತಯಾರು   ಮಾಡ್ಕೊಬೇಕು.  ಮಾಡ್ಕೊಳ್ಳದೇ   ಹೋದ್ರೆ,  ಮಕ್ಕಳ   ಗತಿ   ಏನು ?
ಮಳೆ   ಬರ್ತಾ   ಇದೆ.  ಚಳಿ   ಆಗ್ತಾ   ಇದೆ.  ಏನಾದ್ರೂ   ತಿನ್ಲಿಕ್ಕೆ   ಕೊಡಮ್ಮ.  ಇಲ್ಲೇ   ಇರ್ತೀವಿ.  ಹೊರಗೆಲ್ಲೂ   ಹೋಗಲ್ಲ   ಅಂತ   ಅಂದ್ರೆ   ಸಾಕು,  ಅಮ್ಮ   ತಡೀರಿ   ಮಕ್ಕ್ಳ,  ಅಂಥ  ಹೇಳಿ   ಕಾಫೀ   ಜೊತೆ   ಬಿಸಿ   ಬಿಸಿ   ಪಕೋಡನೊ ,  ಮೆಣಸಿನ   ಕಾಯಿ   ಬಜ್ಜಿನೋ   ಮಾಡಿ   ಕೊಡ್ತಾರೆ. 
ಕಾಫೀ   ಕುಡಿತ,  ಮಳೆ   ನೋಡ್ತಾ,  ಪಕೋಡ   ತಿಂತಿದ್ದ್ರೆ ,  ಆಹಾ!  ಮಜವೋ   ಮಜ.  ಒಳ್ಳೇ   ಮೈ   ಜುಂ   ಅನ್ನುತ್ತೆ.  ಮೈ   ಬೆಚ್ಚಗಾಗುತ್ತೆ. 
ನನಗೆ   ಪಕೋಡ   ಮಾಡ್ಲಿಕ್ಕೆ   ಖಂಡಿತ   ಬರಲ್ಲ .  ಆದ್ರೆ   ತಿನ್ನೋಕೆ   ಮಾತ್ರ…………….  ಈಗ   ಆದಲ್ಲ   ನೆನಪು   ಮಾತ್ರ.  ನಾನು   ಮನೆ   ಬಿಟ್ಟು   ಬೆಂಗಳೂರಲ್ಲಿ   ಕೆಲ್ಸಾ   ಮಾಡ್ತಿದ್ದೇನೆ .  ಮಳೆಗಾಲ   ಬಂದಾಗ   ಅಮ್ಮನ   ಪ್ರೀತಿ,  ಕಾಫೀ,  ಪಕೋಡ   ಎಲ್ಲವೂ   ನೆನಪಾಗುತ್ತೆ .  ಅಮ್ಮನ   ನೋಡಬೇಕು   ಅಂದಾಗ   ಮನೆಗೆ   ಹೋಗಬಹುದು.  ಆದರೆ   ಎಲ್ಲ   ಕಾಲವು   ಮಳೆಗಾಲವಾಗಿರಲ್ಲ   ಅಲ್ಲವೇ?
ಕಾಡುವೆ ಏಕೆ?
ಕಾಡುವೆ ಏಕೆ ಗೆಳೆತಿ
ನೀ ಎದುರಿಗಿದ್ದರು?
ಮಾತನಾಡದೇ ನನ್ನೊಡನೆ
ನಿನ್ನ ಚಂದ್ರ ಮೊಗವ ತೋರದೇ.
ನಿನ್ನ ಕಣ್ಣ ಕಾಂತಿಗಳಿಲ್ಲದೆ
ಈ ಗೆಳೆತನ ಕತ್ತಲಾಗಿದೆ
ನಿನ್ನ ಮುನಿಸು ಮೊಗವ
ನೋಡಿ ಬಳಲುತಿದೆ ಈ ಸ್ನೇಹ
ನಿನ್ನ ಮನದ ಬಯಕೆಯ
ತುಸು ಬೇಗ ತಿಳಿಸು ಗೆಳೆತಿ
ಸ್ನೇಹದ ತಡೆಗೋಡೆಗಳ
ದಾಟಿ ಬರುವೆನು ಬೇಗ
ನೀ ಎದುರಿಗಿದ್ದರು?
ಮಾತನಾಡದೇ ನನ್ನೊಡನೆ
ನಿನ್ನ ಚಂದ್ರ ಮೊಗವ ತೋರದೇ.
ನಿನ್ನ ಕಣ್ಣ ಕಾಂತಿಗಳಿಲ್ಲದೆ
ಈ ಗೆಳೆತನ ಕತ್ತಲಾಗಿದೆ
ನಿನ್ನ ಮುನಿಸು ಮೊಗವ
ನೋಡಿ ಬಳಲುತಿದೆ ಈ ಸ್ನೇಹ
ನಿನ್ನ ಮನದ ಬಯಕೆಯ
ತುಸು ಬೇಗ ತಿಳಿಸು ಗೆಳೆತಿ
ಸ್ನೇಹದ ತಡೆಗೋಡೆಗಳ
ದಾಟಿ ಬರುವೆನು ಬೇಗ
Labels:
ಕವನಗಳು
ಹೂವಾಗಿ ಬರ್ತೀನಿ ಬಾಲೆ
ಹೂವಾಗಿ ಬರ್ತೀನಿ ಬಾಲೆ
ಮುಡಿಯಲಿ ಮೂಡಿದು ಬಾರೇಲೇ
ನಿನ್ನ ಮುಡಿಯಾಗೇ ಕುಂತು ನಾ
ಶೋಭೆ ತರ್ತೀನ್ಲೆ
ಸಂಜೆಗೆ ಬಾಡಿ
ಇರುಳ ಚಂದ್ರನಾಗ್ತೀನ್ಲೆ
ನೀನು ಮಲಗೋಕೆ
ಸವಿ ಜೋಗುಳ ಹಾಡುತ ಕೂರ್ತೀನ್ಲೆ
ಕನಸಲಿ ಬರ್ತೀನ್ಲೆ
ನಿನ್ನ ಮನದೊಳಿಳಿತೀನ್ಲೆ
ನಿನ್ನ ನನ್ನ ಪ್ರೇಮ
ಸಮಾಚಾರ ಮಾತಾಡ್ತಾ ಕೂರ್ತೀನ್ಲೆ
ಬೆಳಿಗ್ಗೆ ಎದ್ದ ಕೂಡಲೇ
ಲೋಟದಾಗೆ ಬಿಸಿ ಕಾಫೀಯಾಗಿ ಬರ್ತೀನ್ಲೆ
ನಿನ್ನ ಚೆನ್ದುಟಿಯ ಸವರಿ
ಮನಕೆ ಜೋಶ್ ತರ್ತೀನ್ಲೆ
ಕೊನೆಯವರೆಗೂ ಬರ್ತೀನೆ ಚೆಲುವೆ
ಕಷ್ಟ-ಸುಖಕೂ ಇರ್ತೀನಿ
ಬೆಳದಿಂಗಳ ಚಂದ್ರನ ಮಾಡಿ
ನಿನ್ನ ಬಾಳ್ವೆ ಕಾಯ್ತೀನ್ಲೆ
ಮುಡಿಯಲಿ ಮೂಡಿದು ಬಾರೇಲೇ
ನಿನ್ನ ಮುಡಿಯಾಗೇ ಕುಂತು ನಾ
ಶೋಭೆ ತರ್ತೀನ್ಲೆ
ಸಂಜೆಗೆ ಬಾಡಿ
ಇರುಳ ಚಂದ್ರನಾಗ್ತೀನ್ಲೆ
ನೀನು ಮಲಗೋಕೆ
ಸವಿ ಜೋಗುಳ ಹಾಡುತ ಕೂರ್ತೀನ್ಲೆ
ಕನಸಲಿ ಬರ್ತೀನ್ಲೆ
ನಿನ್ನ ಮನದೊಳಿಳಿತೀನ್ಲೆ
ನಿನ್ನ ನನ್ನ ಪ್ರೇಮ
ಸಮಾಚಾರ ಮಾತಾಡ್ತಾ ಕೂರ್ತೀನ್ಲೆ
ಬೆಳಿಗ್ಗೆ ಎದ್ದ ಕೂಡಲೇ
ಲೋಟದಾಗೆ ಬಿಸಿ ಕಾಫೀಯಾಗಿ ಬರ್ತೀನ್ಲೆ
ನಿನ್ನ ಚೆನ್ದುಟಿಯ ಸವರಿ
ಮನಕೆ ಜೋಶ್ ತರ್ತೀನ್ಲೆ
ಕೊನೆಯವರೆಗೂ ಬರ್ತೀನೆ ಚೆಲುವೆ
ಕಷ್ಟ-ಸುಖಕೂ ಇರ್ತೀನಿ
ಬೆಳದಿಂಗಳ ಚಂದ್ರನ ಮಾಡಿ
ನಿನ್ನ ಬಾಳ್ವೆ ಕಾಯ್ತೀನ್ಲೆ
Labels:
ಕವನಗಳು
ನನ್ನ ಮೊದಲನೆ ಲವ್ ಲೆಟರ್

ಹೈ ಡಿಯರ್ ಲಿಲ್ಲಿ,
ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲನೆ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.
ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.
ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?
ಈ ಲೆಟರ್ ನ ಟೈಮ್ ಪಾಸ್ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?
ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವನ್ತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ. ಸೋ ನೋ ಎಕ್ಸ್ಪೆಕ್ಟೇಶನ್, ಓನ್ಲೀ ಲವ್,
ಟೇಕ್ ಕೇರ್,
ರಾಜ್
Labels:
ಹಾಗೆ ಸುಮ್ಮನೇ
Subscribe to:
Comments (Atom)