ಚಿಟ್ಟೆ


ಹೂವಿಂದ ಹೂವಿಗೆ ಹಾರುತಿದೆ
ಮತ್ತೊಂದು ಹೂವು
ಹೂವಲ್ಲು ನಗುವರಳಿಸೊ
ಚೆನ್ದದ ಬಣ್ಣದ ಹೂವು

ಇದೆ ಮೊದಲು ಕಂಡಿದ್ದೇನೋ?
ಮನ ಬಿಚ್ಚಿ ಕುಣಿದಿದ್ದೇನೋ?
ಹಿಡಿಯಲು ನನ್ನ ಚಿತ್ತ
ಹಾರುತಿದೆ ಚಿಟ್ಟೆಯ ಸುತ್ತಮುತ್ತ

ಕೆಂಪು, ಹಸಿರು, ನೀಲಿಯುಂಟು
ನೇರ, ವಕ್ರ ರೇಖೆಗಳುಂಟು
ಚೆನ್ದದಿ ಕತ್ತರಿಸಿದ ಜೋಡಿ ರೆಕ್ಕೆಯ ನಡುವೆ
ನಲಿವಿನ ಸುಳಿವುಂಟು.

ಮನೆಯೇ ಮಂದಿರವಾಗಲಿ

ಮನೆಯೇ ಮಂದಿರವಾಗಲಿ
ಮನಸು ದೇವರಾಗಲಿ
ನಿಮ್ಮ ಪ್ರೀತಿ, ಹಾರೈಕೆಗಳೇ
ನನಗೆ ದಾರಿದೀಪವಾಗಲಿ