ಮಳೆ, ಕಾಫೀ ಮತ್ತು ಪಕೋಡ

ಮಳೆಗಾಲ ಅಂದ್ರೆ ಸುರ್ರನೆ ಸುರಿಯೋ ಮಳೆ . ವಟಗುಟ್ಟುವ ಕಪ್ಪೇಗಳು . ಮಳೆ ನಿಂತರು ನಿಲ್ಲದ ಮರದ ಹನಿಗಳು . ಕಿಟಕಿಯ ಹೊರಗೆ ಮತ್ತೊಂದು ಹೊಸ ಜಗತ್ತು ಅನಾವರಣಗೊಂಡ ಹಾಗಿರುತ್ತೆ . ಮಲೆನಾಡಲ್ಲಿ , ಮಳೆಯ ಹಾಡಿನ ನಡುವೆ ಸೂರ್ಯನ ಬಿಸಿಲನ್ತು ಮಳೆ ಮುಗಿಯೋವರೆಗೆ ಮರೆತೆ ಬಿಡಬೇಕು . ಹಾಗಂತ ಬಿಸಿಲು ಇರೋದೇ ಇಲ್ಲ ಅಂತಾನು ಹೇಳೊಕಾಗಲ್ಲ , ಕಂಡರೆ ಅದೊಂದು ಎಳೆ ಬಿಸಿಲು ಇದ್ದ ಹಾಗೆ , ಮನಸ್ಸಿಗೆ ಒಂಥರ ಹಿತವಾಗಿರುತ್ತೆ . ಚಳಿ ಮಳೆಗಾಲದ ಅವಿಭಾಜ್ಯ ಅಂಗ ಅಂದುಕೊಳ್ಳಿ . ಅನ್ದುಕೊಳ್ಳೋದೆನು ಅದು ಇದ್ದೇ ಇರುತ್ತೆ . ಆದರೆ ರೈತಾಪಿ ಜನಗಳಿಗೆ ಮಳೆಗಾಲ ಶುರು ಆಯ್ತು ಅಂದ್ರೆ ಆರಂಭ ( ಕೃಷಿ , ವ್ಯವಸಾಯ ) ಮಾಡೋ ಕಾಲ . ಮನೆಗೆ ಅದಕ್ಕಿಂತ ಮುಂಚೆ ಸೌಧೆ ( ಉರುವಲು ) ಜೋಡಿಸ್‌ಬೇಕು , ಮನೆಯ ಅಟ್ಟನಿಗೆ ಎಲ್ಲ ಸರಿ ಮಾಡ್ಬೇಕು , ವ್ಯವಸಾಯಕ್ಕೆ ಬೇಕಾಗೋ ಅದು ಇದು ಎಲ್ಲ ಸಿದ್ಧ ಮಾಡಿ ಇಟ್ಕೋಬೇಕು .

ವ್ಯವಸಾಯ ಮಾಡೋದೇನೋ ಸರಿ, ಹೊಟ್ಟೆಗೆ ? ಮಳೆಗಾಲಕ್ಕೆ ಮುಂಚೆ ಖಾರದ ಪುಡಿ, ಹಪ್ಪಳ, ಸನ್ಡಿಗೆ, ಚಕ್ಕಲಿ ಎಲ್ಲ ತಯಾರು ಮಾಡ್ಕೊಬೇಕು. ಮಾಡ್‌ಕೊಳ್ಳದೇ ಹೋದ್ರೆ, ಮಕ್ಕಳ ಗತಿ ಏನು ?
ಮಳೆ ಬರ್ತಾ ಇದೆ. ಚಳಿ ಆಗ್ತಾ ಇದೆ. ಏನಾದ್ರೂ ತಿನ್ಲಿಕ್ಕೆ ಕೊಡಮ್ಮ. ಇಲ್ಲೇ ಇರ್ತೀವಿ. ಹೊರಗೆಲ್ಲೂ ಹೋಗಲ್ಲ ಅಂತ ಅಂದ್ರೆ ಸಾಕು, ಅಮ್ಮ ತಡೀರಿ ಮಕ್ಕ್ಳ, ಅಂಥ ಹೇಳಿ ಕಾಫೀ ಜೊತೆ ಬಿಸಿ ಬಿಸಿ ಪಕೋಡನೊ , ಮೆಣಸಿನ ಕಾಯಿ ಬಜ್ಜಿನೋ ಮಾಡಿ ಕೊಡ್ತಾರೆ.

ಕಾಫೀ ಕುಡಿತ, ಮಳೆ ನೋಡ್ತಾ, ಪಕೋಡ ತಿಂತಿದ್ದ್ರೆ , ಆಹಾ! ಮಜವೋ ಮಜ. ಒಳ್ಳೇ ಮೈ ಜುಂ ಅನ್ನುತ್ತೆ. ಮೈ ಬೆಚ್ಚಗಾಗುತ್ತೆ.

ನನಗೆ ಪಕೋಡ ಮಾಡ್ಲಿಕ್ಕೆ ಖಂಡಿತ ಬರಲ್ಲ . ಆದ್ರೆ ತಿನ್ನೋಕೆ ಮಾತ್ರ……………. ಈಗ ಆದಲ್ಲ ನೆನಪು ಮಾತ್ರ. ನಾನು ಮನೆ ಬಿಟ್ಟು ಬೆಂಗಳೂರಲ್ಲಿ ಕೆಲ್ಸಾ ಮಾಡ್ತಿದ್ದೇನೆ . ಮಳೆಗಾಲ ಬಂದಾಗ ಅಮ್ಮನ ಪ್ರೀತಿ, ಕಾಫೀ, ಪಕೋಡ ಎಲ್ಲವೂ ನೆನಪಾಗುತ್ತೆ . ಅಮ್ಮನ ನೋಡಬೇಕು ಅಂದಾಗ ಮನೆಗೆ ಹೋಗಬಹುದು. ಆದರೆ ಎಲ್ಲ ಕಾಲವು ಮಳೆಗಾಲವಾಗಿರಲ್ಲ ಅಲ್ಲವೇ?

No comments: