ನಿದ್ದೇನ ಕದ್ದವಳು
ಬರೆಯುವ ಮೊದಲೆ ಅಕ್ಷರವ ಕದಿಯೋಳು
ಬರೆದಾದ ಮೇಲೂ ನಿದ್ದೇನ ಕದ್ದವಳು
ನನ್ನೆದುರಿಗೆ ಬಂದಾಗ ಏನು ಮಾಡಲಿ
ಅವಳೇನಾದರೂ ಕೇಳಿದರೆ ಏನು ಹೇಳಲಿ?
ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು
ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು
ಮಾತಿಗೆ ಎದುರಾಡದೆ ನಿಂತಾಗ
ನಕ್ಕು ಓಡಿದರೆ ನಾನೇನೂ ಮಾಡಲಿ?
ಕದ್ದ ಮಾಲು ಪಡೆಯುವುದಾದರು ಹೇಗೆ
ಕದ್ದ ಕನಸು, ಮನಸು ಬರುವುದೇ ಹಾಗೆ
ನೀವಾದರೂ ಸ್ವಲ್ಪ ಹೇಳಿ ಅವಳಿಗೆ
ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು
ಕೊಡಲಿ
ಪ್ರೀತಿ ಎಲ್ಲಿದ್ದರೂ ಚೆನ್ನಾಗಿರಲಿ.......
ಹೇ ಹುಡುಗಿ ಹೇಗಿದ್ದೀಯಾ?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ? ಎಲ್ಲಿದ್ದೀಯ? ಏನು ಮಾಡ್ತಿದ್ದೀಯಾ? ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ, ನಿನ್ನ ಉತ್ತರ ಕೇಳಿ, ನನಗೆ ತುಂಬಾ ಸಮಾಧಾನ ಆಯ್ತು. ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ನಿನ್ನೆದುರಿಗೆ ವ್ಯಕ್ತಪಡಿಸೋದು ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ.
ನಮ್ಮ ಹಿಂದಿನ ಸವಿ ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ. ಅವತ್ತು ಸವಿಯಾಗಿದ್ದ ಪ್ರೀತಿ ಇಂದಿಗೂ ನನಗೆ ಸವಿಯೇ. ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ. ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ.
ಹೋಗಲಿ ಬಿಡು. ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು, ನಿಜವಾಗಿಯೂ ಒಂದು ಸಾಹಸವೇ ಹೌದು. ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ, ತೊದಲುತ್ತಿದೆ. ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು. ನಾವೇನು ಪ್ರೀತಿಗಾಗಿ ತಾಜ್್ಮಹಲ್ ಕಟ್ಟಬೇಕಾಗಿರಲಿಲ್ಲ, ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು. ಈ ದಿನ ನಿನ್ನ ಬದುಕು ಹಸನಾಗಿದೆ. ನಾನೂ ಪರವಾಗಿಲ್ಲ. ಜೀವನವೆಂಬುದು ರೇಸಲ್ಲ, ನಾವೂ ಸೋಲಲಿಲ್ಲ. ನಿನ್ನ ಬದುಕು ಹೀಗೆ ಸುಂದರವಾಗಿರಲೆಂದೆ ನನ್ನ ಹಾರೈಕೆ.
................

Labels:
ಹಾಗೆ ಸುಮ್ಮನೇ
ನಮಗೆ ನೆಮ್ಮದಿ ಮುಖ್ಯನೋ ಅಥವಾ ಮದುವೆ ಮುಖ್ಯನೋ?
Labels:
ಹಾಗೆ ಸುಮ್ಮನೇ
ಯುಗಾದಿ
ಗೆಲ್ಲುವ ಚಲವಿತ್ತು
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು
ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ
ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ
ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು
ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ
ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ
ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ
ಬಂತೊಂದು ಹೊಸ ವರುಷ
ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
ವರುಷವಿಡಿ ಇರಲಿ
ಎಲ್ಲ ನಲಿದಾಡೋ ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
ವರುಷವಿಡಿ ಇರಲಿ
ಎಲ್ಲ ನಲಿದಾಡೋ ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ
Subscribe to:
Posts (Atom)